ಮುರಾರಿ
 	ಸಂಸ್ಕøತ ಕವಿ. ಕಾಲ ಎಂಟನೆಯ ಶತಮಾನದ ಉತ್ತರಾರ್ಧ ಎನ್ನಬಹುದು. ಸಂಸ್ಕøತ ನಾಟಕ ಸಾಹಿತ್ಯ ತನ್ನ ಪ್ರತಿಭೆಯನ್ನು ಕಳೆದುಕೊಂಡ ಕಾಲದಲ್ಲಿ ಈತ ಇದ್ದಂತೆ ತಿಳಿದುಬರುತ್ತದೆ. ಈತ ಮೌದ್ಗಲ್ಯಗೋತ್ರದ ಭಟ್ಟ ವರ್ಧಮಾನ ಹಾಗೂ ತನುಮತಿ ಇವರ ಪುತ್ರ. ಈತನಿಗೆ ಬಾಲ ವಾಲ್ಮೀಕಿ ಎಂಬ ಬಿರುದೂ ಇದೆ.

	ಈತನ ಕೃತಿ ಅನರ್ಘರಾಘವ. ಇದು ಏಳು ಅಂಕಗಳ ನಾಟಕ, ರೌದ್ರ, ಬೀಭತ್ಸ ಭಯಾನಕ ರಸಗಳಿಂದ ಕೂಡಿದೆ. ಇದರಲ್ಲಿ ವಿಶ್ವಾಮಿತ್ರ ಯಜ್ಞರಕ್ಷಣೆಗಾಗಿ ರಾಮ ಲಕ್ಷ್ಮಣರನ್ನು ತನ್ನ ಆಶ್ರಮಕ್ಕೆ ಕರೆದುಕೊಂಡು ಹೋಗುವುದರಿಂದ ಹಿಡಿದು ರಾಮ ರಾವಣವಧೆ ಮಾಡಿ ಹಿಂತಿರುಗಿ ಬಂದು ಪಟ್ಟಾಭಿಷಿಕ್ತನಾಗುವವರೆಗಿನ ಕಥೆ ಅಡಕವಾಗಿದೆ. ಅನರ್ಘರಾಘವ ನಾಟಕಕಲಾದೃಷ್ಟಿಯಿಂದ ಅಷ್ಟು ಉತ್ತಮವಾಗಿರದೆ ಕಾವ್ಯಕಲೆಯ ದೃಷ್ಟಿಯಿಂದ ಉತ್ತಮವೆನಿಸುತ್ತದೆ.
(ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ